Header Ads

Ganagapur History In Kannada, ganagapur dattatreya temple information in kannada

 Ganagapur History In Kannada,  ganagapur dattatreya temple information in kannada

Ganagapur History In Kannada | ganagapur dattatreya temple information in kannada



*ದತ್ತ ಗುರುವಿನ ದಿವ್ಯ ಕ್ಷೇತ್ರ ಶ್ರೀ ಗಾಣಗಪುರ.*


ಶ್ರೀ ಕ್ಷೇತ್ರ ಗಾಣಗಾಪುರ ಕರ್ನಾಟಕದ ಸುಪ್ರಸಿದ್ಡ ಧಾರ್ಮಿಕ ಕ್ಷೇತ್ರ. *ಶ್ರೀ ಕ್ಷೇತ್ರ ಗಾಣಗಾಪುರವು ಗುಲ್ಬರ್ಗಾದಿಂದ ನಗರದಿಂದ ಸುಮಾರು ೫೦ ಕಿಲೋಮೀಟರುಗಳ ದೂರದಲ್ಲಿದೆ.*   


ದತ್ತಸಂಪ್ರದಾಯದ ಒಂದು ಪವಿತ್ರ ತೀರ್ಥಕ್ಷೇತ್ರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯಲ್ಲಿ ಪುಣೆ - ರಾಯಚೂರು ರೈಲುಮಾರ್ಗದಲ್ಲಿರುವ ಗಾಣಗಾಪುರ ರೈಲುನಿಲ್ದಾಣದಿಂದ 22 ಕಿಮೀ ದೂರದಲ್ಲಿ *ಭೀಮಾ- ಅಮರಜ ನದಿಗಳ ಸಂಗಮದ ಹತ್ತಿರ ಈ ಊರು ಇದೆ.*                  


*ಶ್ರೀಗುರುಚರಿತ್ರೆ ಎಂಬ* ಗ್ರಂಥದಲ್ಲಿ ಇದನ್ನು ಗಾಣಗಾಪುರ, ಗಾಣಗಾಭವನ, ಗಂಧರ್ವಭವನ, ಗಂಧರ್ವಪುರ ಎಂಬ ಹೆಸರುಗಳಿಂದ ಉಲ್ಲೇಖಿಸ ಲಾಗಿದೆ.


*ಪಾತಿವ್ರತ್ಯದ ಶಕ್ತಿಯಿಂದ ತ್ರಿಮೂರ್ತಿಗಳನ್ನು ತನ್ನ ಮಕ್ಕಳನ್ನಾಗಿ ಮಾಡಿದ ಅನಸೂಯಾ ಕಥೆ ನಮಗೆ ತಿಳಿದದ್ದೇ.*          


*ತ್ರಿಮೂರ್ತಿಗಳು ಒಂದೇ ಅವತಾರದಲ್ಲಿ ನೆಲೆಸಿದ್ದು* ದೇವಲಗಾಣಗಾಪುರದಲ್ಲಿ . 


*ಸೃಷ್ಟಿಕರ್ತ, ಸೃಷ್ಟಿರಕ್ಷಕ, ಲಯಕರ್ತ ಈ ಮೂವರು ಒಂದೇ ರೂಪದಲ್ಲಿ ನೆಲೆಸಿರುವ*               


ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಲಗಾಣಗಾಪುರ       


*ಪವಿತ್ರ ತಾಣ. ಬ್ರಹ್ಮ, ವಿಷ್ಣು, ಮಹೇಶ್ವರರು ದತ್ತಾತ್ರೇಯ ಎಂಬ ನಾಮದಿಂದ ಅವತರಿಸಿದ ಪಾವನಕ್ಷೇತ್ರ ಇದಾಗಿದೆ.*


 ದತ್ತಾವತಾರಿ ಎಂದು ಪ್ರಸಿದ್ಧಿಹೊಂದಿರುವ ಶ್ರೀನರಸಿಂಹ ಸರಸ್ವತಿಯವರು ವಾಡಿ ಎಂಬ ಊರಿನಿಂದ ಇಲ್ಲಿಗೆ *ಬಂದು ಸುಮಾರು 23 ವರ್ಷ ನೆಲೆಸಿದ್ದರು.* ಈ ಅವಧಿಯಲ್ಲಿ ಇಲ್ಲಿ ದತ್ತಸಂಪ್ರದಾಯವನ್ನನುಸರಿಸುವವರ ಸಂಖ್ಯೆ ಹೆಚ್ಚಾಯಿತು. ಸರಸ್ವತಿಯವರು ಮೊದಲು ಸಂಗಮದ ಹತ್ತಿರವೇ ವಾಸವಾಗಿದ್ದು ಅನಂತರ ಊರ ಮಧ್ಯದಲ್ಲಿರುವ ಮಠದಲ್ಲಿರತೊಡಗಿ ಮುಂದೆ ಶ್ರೀಶೈಲದ ಕಡೆಗೆ ತೆರಳಿದರು. ಮಠದ ಆವಾರದಲ್ಲಿ ಮಹಾದೇವ - ಪಾರ್ವತಿಯರ ಮೂರ್ತಿ, *ಅಶ್ವತ್ಥವೃಕ್ಷದ ಪೊದರಿನಲ್ಲಿ ನಾಗನಾಥ ಮತ್ತು ಹನುಮಂತನ ಮೂರ್ತಿಗಳು ತುಲಸೀ ವೃಂದಾವನಗಳು ಗೋಚರವಾಗುತ್ತವೆ.*           


ಈ ಮಠದಲ್ಲಿರುವ ಶ್ರೀಗುರುಗಳ *ಪಾದುಕೆಗಳು ನಿರ್ಗುಣ ಪಾದುಕೆಗಳೆಂದು ಹೆಸರಾಗಿವೆ.*      


ವಾಡಿಯಲ್ಲಿರುವ ಪಾದುಕೆಗಳನ್ನು ಮನೋಹರ ಪಾದುಕೆಗಳೆನ್ನುತ್ತಾರೆ.     


*ಮಠದ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಎರಡು ಮಹಾದ್ವಾರ ಗಳಿವೆ*. ಪಶ್ಚಿಮದ ಮಹಾದ್ವಾರ ವಿಶಾಲವಾಗಿದ್ದು ಅದರ ಮಹಡಿಯಲ್ಲಿ ನಗಾರಖಾನೆ (ದೇವಸ್ಥಾನದ ನಗಾರಿಗಳನ್ನು ಬಾರಿಸುವ ಜಾಗ) ಇದೆ. ಭಕ್ತಾದಿಗಳು ಕೂಡಲು ಯೋಗ್ಯವಾದ ಏಳು ಜಗಲಿಗಳಿವೆ. 


*ಗರ್ಭಗುಡಿಯಲ್ಲಿನ ಪಾದುಕೆಗಳ ದರ್ಶನ ಮಾಡಬೇಕಾದರೆ* ಉಡುಪಿಯಲ್ಲಿರುವಂತೆ ಒಂದು ಬೆಳ್ಳಿಯ ಕಿಟಕಿಯ ಮೂಲಕ ನೋಡಬೇಕಾಗುತ್ತದೆ. ಇಲ್ಲಿ ನಿತ್ಯೋಪಾಸನೆ ಬೆಳಗ್ಗಿನಿಂದ ಪ್ರಾರಂಭವಾಗುತ್ತದೆ. ಪಾದುಕೆಗಳಿಗೆ ಜಲಸ್ಪರ್ಶ ಮಾಡುವುದಿಲ್ಲ. *ಕೇಸರಿ ಮತ್ತು ಅಷ್ಟಗಂಧಗಳನ್ನು ಲೇಪಿಸುತ್ತಾರೆ.*                   


ಪ್ರತಿ *ಗುರುವಾರ ರಾತ್ರಿ ಪಲ್ಲಕ್ಕಿಸೇವೆ ನಡೆಯುತ್ತದೆ.*


*ಇಂದಿಗೂ ಗಾಣಗಾಪುರದಲ್ಲಿ ದತ್ತಮಹಾರಾಜರು ಶ್ರೀಪಾದರು ಹಾಗೂ ನರಸಿಂಹ ಸರಸ್ವತಿಗಳು ಮೂರು ಅವತಾರಗಳಲ್ಲಿ ನೆಲೆಸಿ ಭಕ್ತರನ್ನು ಉದ್ಧರಿಸುತ್ತಿದ್ದಾರೆ.*         


*ದತ್ತನ ಪಾದುಕಾಪೂಜೆ ಇಲ್ಲಿನ ವಿಶೇಷ.* 


*ದತ್ತಜಯಂತಿ, ನರಸಿಂಹ ಸರಸ್ವತಿ ಜಯಂತಿ ಆಚರಿಸಲಾಗುತ್ತದೆ.* 


ಮಹಾರಾಷ್ಟ್ರ *ಭಕ್ತರು ದತ್ತನ ದರ್ಶನಕ್ಕೆ ಹೆಚ್ಚಾಗಿ ಆಗಮಿಸುತ್ತಾರೆ.*


 ಕಲಬುರಗಿಯಿಂದ ಕೇವಲ 35-40 ಕಿಮೀ ದೂರದಲ್ಲಿರುವ ಈ ಕ್ಷೇತ್ರಕ್ಕೆ ಬಸ್ ಮತ್ತು ರೈಲು ಸಂಚಾರ ವ್ಯವಸ್ಥೆ ಇದೆ.

ಊರಿನಿಂದ 1.6 ಕಿಮೀ ದೂರದಲ್ಲಿ ಭೀಮಾ- ಅಮರಜ ನದಿಗಳ ಸಂಗಮದ ಹತ್ತಿರ ಭಸ್ಮದ ರಾಶಿಯಿದೆ. ಹಿಂದೆ ಇಲ್ಲಿ ಯಜ್ಞಕಾರ್ಯಗಳು ನೆರವೇರುತ್ತಿದ್ದು ಆ ಯಜ್ಞಬೂದಿಯನ್ನು ಹೀಗೆ ಒಂದು ಕಡೆ ಗುಡ್ಡೆ ಮಾಡಲಾಗಿದೆಯೆಂದು ಪ್ರತೀತಿ. ಭಾವುಕ ಭಕ್ತರು ಸ್ನಾನಮಾಡಿದ ಅನಂತರ ಈ ಭಸ್ಮವನ್ನು ಲೇಪಿಸಿಕೊಳ್ಳುವರು. 


*ಸಂಗಮೇಶ್ವರ ದೇವಾಲಯದ ಎದುರು ಶ್ರೀನರಸಿಂಹ ಸರಸತ್ವಿಯವರ ತಪೋಭೂಮಿ ಇದೆ.* ಸಂಗಮದಿಂದ ಊರಿಗೆ ಬರುವ ದಾರಿಯಲ್ಲಿ ಷಟ್ಕುಲತೀರ್ಥ, ನರಸಿಂಹತೀರ್ಥ, ಭಾಗೀರಥೀತೀರ್ಥ, *ಪಾಪವಿನಾಶಿತೀರ್ಥ,* ಕೋಟಿತೀರ್ಥ, ರುದ್ರಪಾದತೀರ್ಥ, ಚಕ್ರತೀರ್ಥ ಮತ್ತು ಮನ್ಮಥತೀರ್ಥ ಎಂಬ *ಎಂಟು ತೀರ್ಥಗಳಿವೆ.* 


ಇಲ್ಲಿನ *ತೀರ್ಥಗಳಲ್ಲಿ ಸ್ನಾನಮಾಡಿದರೆ* ಅನೇಕ ಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ.


ಗಾಣಗಾಪುರದ ಉತ್ಸವ ಸಮಾರಂಭಗಳಲ್ಲಿ 


*ಶ್ರೀದತ್ತಜಯಂತಿ ಮತ್ತು ಶ್ರೀನರಸಿಂಹ ಸರಸ್ವತಿಯವರ ಪುಣ್ಯತಿಥಿ* - ಇವೆರಡು ವಿಶೇಷ ಮಹತ್ತ್ವದವು.      


*ಶ್ರೀಗುರುವಿನ ಜೀವನಕಾರ್ಯ ಇಲ್ಲಿಯೇ ನಡೆದುದರಿಂದ ಈಗ ಸು. 500 ವರ್ಷಗಳಿಂದ ಇದು ಭಕ್ತರಿಗೆ ಜಾಗೃತ ಸ್ಥಾನವಾಗಿದೆ.*


ಆಧಿವ್ಯಾಧಿಗಳಿಂದ ಬಳಲುವ ಅನೇಕ ಜನ ತಮ್ಮ *ದುಃಖನಿವಾರಣೆಗಾಗಿ ಇಲ್ಲಿಗೆ ಬಂದು ಸೇವೆಮಾಡಿ*


*ಶ್ರೀಗುರುಚರಿತ್ರೆ* ಪಾರಾಯಣಮಾಡಿ ಭಿಕ್ಷಾ ಜೀವನವನ್ನು ನಡೆಸುವರು. 


*ಶ್ರೀಗುರುಚರಿತ್ರೆಯಲ್ಲಿನ ಚಮತ್ಕಾರಿ* ಕಥೆಗಳನ್ನೋದುವುದರಿಂದ ಶ್ರದ್ಧಾಜೀವನವನ್ನನುಸರಿಸುವುದರಲ್ಲಿ ವಿಶ್ವಾಸ ಹುಟ್ಟುತ್ತದೆ. 


*ಮಠದಲ್ಲಿ ಮಧ್ಯಾಹ್ನ ಮಹಾನೈವೇದ್ಯ ನಡೆಯುತ್ತದೆ*. ಅನಂತರ ಸೇವಾಕರ್ತರು ಮಧುಕರಿ ಬೇಡಲು ಹೋಗುತ್ತಾರೆ. *ಧನಿಕರಾದ ಅನೇಕ ದತ್ತಭಕ್ತರು ಸೇವಾಕರ್ತರಿಗೆ ಧನಧಾನ್ಯ ಸಹಾಯ ಒದಗಿಸುತ್ತಿದ್ದಾರೆ.* 


ದತ್ತವ್ರತದ ಪ್ರಕಾರ ಪ್ರತಿಯೊಬ್ಬ ಯಾತ್ರಿಕನೂ *ಕನಿಷ್ಠಪಕ್ಷ ಐದು ಮನೆಗಳಿಗಾದರೂ ಹೋಗಿ* ಬೇಡಬೇಕು ಎಂಬುದು ನಿಯಮ. ಭಾವುಕ ಭಕ್ತರು ಈ ನಿಯಮವನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತಾರೆ.


*ತಲುಪುವ ಮಾರ್ಗ*👇





*ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್​ಗಳಿಂದ* ರೈಲಿನಲ್ಲಿ ಆಗಮಿಸುವ ಭಕ್ತರು ಕಲಬುರಗಿ ರೈಲು ನಿಲ್ದಾಣದಲ್ಲಿಳಿದು ಬಸ್ ಮೂಲಕ ನೇರವಾಗಿ ದೇವಲಗಾಣಗಾಪುರಕ್ಕೆ ತೆರಳಬಹುದು.        


*ಇಲ್ಲವಾದರೆ ಸ್ಟೇಷನ್ ಗಾಣಗಾಪುರದ ರೈಲು ನಿಲ್ದಾಣದಲ್ಲಿಳಿದು 15 ಕಿ.ಮೀ. ಕ್ರಮಿಸಿ ದೇವಲಗಾಣಗಾಪುರಕ್ಕೆ ತಲುಪಬೇಕಾಗುತ್ತದೆ.* 


*ಮುಂಬೈ-ಚೆನ್ನೈ ಮುಖ್ಯ ರೈಲು ಮಾರ್ಗದಲ್ಲಿ ಸ್ಟೇಷನ್ ಗಾಣಗಾಪುರ ನಿಲ್ದಾಣವಿದೆ.* ಅಫಜಲಪುರ ಮಾರ್ಗವಾಗಿಯೂ ಈ ಕ್ಷೇತ್ರಕ್ಕೆ ತೆರಳಬಹುದಾಗಿದೆ.

No comments:

ads

ads 728x90 B